ಫಿಲಡೆಲ್ಫಿಯಾದಲ್ಲಿ 'ಅಕ್ಕ' ರಜತ ಮಹೋತ್ಸವ: ಸಾಂಸ್ಕೃತಿಕ ರಾಯಭಾರಿಯಾಗಿ ರಿಷಬ್ ಶೆಟ್ಟಿ ನೇಮಕ!

Karnataka:

Font size:

ರಜತ ಮಹೋತ್ಸವ ಸಂಭ್ರಮವು ವಿಶ್ವದ ಕನ್ನಡಿಗರ ಏಕತೆಯ ಪ್ರತೀಕವಾಗಿದ್ದು, ಅಮೆರಿಕದ ವಿವಿಧ ರಾಜ್ಯಗಳಿಂದ ಹಾಗೂ ಕರ್ನಾಟಕ ಸೇರಿದಂತೆ ವಿವಿಧೆಡೆಯಿಂದ ಕನ್ನಡಾಭಿಮಾನಿಗಳು ಭಾಗವಹಿಸಲಿದ್ದಾರೆ

ಬೆಂಗಳೂರು: ಅಮೆರಿಕ ಕನ್ನಡ ಕೂಟಗಳ ಆಗರವು (ಅಕ್ಕ) ಸೆಪ್ಟೆಂಬರ್‌ 4ರಿಂದ 6ರವರೆಗೆ ಅಮೆರಿಕದ ಫಿಲಡೆಲ್ಫಿಯಾದಲ್ಲಿ ಹಮ್ಮಿಕೊಂಡಿರುವ ರಜತ ಮಹೋತ್ಸವ ಸಮಾರಂಭಕ್ಕೆ ನಟ ರಿಷಬ್ ಶೆಟ್ಟಿ ಅವರನ್ನು ಸಾಂಸ್ಕೃತಿಕ ರಾಯಭಾರಿಯನ್ನಾಗಿ ಘೋಷಿಸಿದೆ.

ರಜತ ಮಹೋತ್ಸವ ಸಂಭ್ರಮವು ವಿಶ್ವದ ಕನ್ನಡಿಗರ ಏಕತೆಯ ಪ್ರತೀಕವಾಗಿದ್ದು, ಅಮೆರಿಕದ ವಿವಿಧ ರಾಜ್ಯಗಳಿಂದ ಹಾಗೂ ಕರ್ನಾಟಕ ಸೇರಿದಂತೆ ವಿವಿಧೆಡೆಯಿಂದ ಕನ್ನಡಾಭಿಮಾನಿಗಳು ಭಾಗವಹಿಸಲಿದ್ದಾರೆ. ಮೂರು ದಿನಗಳ ಕಾರ್ಯಕ್ರಮದಲ್ಲಿ ಕನ್ನಡ ನಾಡು–ನುಡಿಗೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು, ವಾಣಿಜ್ಯ ಹಾಗೂ ಉದ್ಯಮಿಗಳ ಸಮ್ಮೇಳನ, ಕನ್ನಡ ಚಲನಚಿತ್ರ ಹಾಗೂ ನಾಟಕಗಳ ಪ್ರದರ್ಶನ ಸೇರಿ ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಉತ್ತರ ಅಮೆರಿಕಾದ ಕನ್ನಡ ಸಮುದಾಯಕ್ಕೆ ಇದು ಅಪಾರ ಹೆಮ್ಮೆ ಮತ್ತು ಸಂತೋಷದ ವಿಷಯವಾಗಿದೆ. ರಿಷಬ್ ಶೆಟ್ಟಿ ಅವರ ಉಪಸ್ಥಿತಿ ಈ ಸಮ್ಮೇಳನಕ್ಕೆ ಇನ್ನಷ್ಟು ಭವ್ಯತೆ, ಗೌರವ ಮತ್ತು ಅಂತರರಾಷ್ಟ್ರೀಯ ಮೆರುಗು ನೀಡಲಿದೆ ಎಂದಿದ್ದಾರೆ.

ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಮೇಲಿನ ಅವರ ಆಳವಾದ ಪ್ರೀತಿಯಿಂದ, ಅವರ ವಿಶಿಷ್ಟ ಕಲಾತ್ಮಕ ದೃಷ್ಟಿಕೋನದ ಮೂಲಕ, ರಿಷಬ್ ಶೆಟ್ಟಿ ಅವರು ಕನ್ನಡ ಹೆಮ್ಮೆಯನ್ನು ಜಾಗತಿಕವಾಗಿ ಹೆಚ್ಚಿಸಿದ್ದಾರೆ. ಅವರು ಕನ್ನಡಿಗರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

Comments

Leave a Comment

Prev Post 'ತನ್ನನ್ನು ಸರ್ವೋಚ್ಚ ನಾಯಕನನ್ನಾಗಿ ಮಾಡಲು ಇರಾನ್ ಬಯಸಿದೆ; ಆದರೆ ನಾನು ತಿರಸ್ಕರಿಸಿದೆ': ಡೊನಾಲ್ಡ್ ಟ್ರಂಪ್
Next Post Winter Health Tips: ದಿನಕ್ಕೊಂದು ನೆಲ್ಲಿಕಾಯಿ ಸೇವಿಸಿ; ಅನಾರೋಗ್ಯಕ್ಕೆ ಹೇಳಿ bye.. bye

Love Mocktail 3 Movie Review: ತಂದೆ-ಮಗಳ ಬಾಂಧವ್ಯದ ಕತೆ ಹೇಳುವ ಲವ್ ಮಾಕ್ಟೇಲ್; ಹಾಸ್ಯ ಎಮೋಷನ್ ಗಳ ಕಾಕ್ಟೇಲ್; ಮೂರರಲ್ಲಿ ಇದುವೇ ಬೆಸ್ಟ್!

ಡಾರ್ಲಿಂಗ್ ಕೃಷ್ಣ ನಿರ್ದೇಶನದ ‘ಲವ್ ಮಾಕ್ಟೇಲ್ 3’ ಚಿತ್ರವು ತಂದೆ-ಮಗಳ ಭಾವನಾತ್ಮಕ ಕಥೆಯನ್ನು ಹೇಳುತ್ತದೆ; ಫ್ಯಾಮಿಲಿ ಎಂಟರ್ಟೈನರ್ ಆಗಿ ಮೆಚ್ಚುಗೆ ಪಡೆಯುತ್ತಿದೆ

Read all News